top of page

BA

Bachelor of Arts

ಐಚ್ಛಿಕಕನ್ನಡ, ಪತ್ರಿಕೋದ್ಯಮ, ಸಮಾಜಶಾಸ್ತ್ರ

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಅತ್ಯಂತ ಪ್ರಾಚೀನವಾದ ಈ ಭಾಷೆಯನ್ನು ಭಾರತಸರ್ಕಾರವು "ಶಾಸ್ತ್ರೀಯ ಭಾಷೆ" ಎಂದು ಪರಿಗಣಿಸಿ ಗೌರವಿಸಿದೆ. ಶ್ರೇಷ್ಠ ಸಾಹಿತ್ಯವನ್ನು ಹೊಂದಿರುವ ಕನ್ನಡ ಆರಂಭದಿಂದಲೂ ಅನೇಕ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಹೀಗೆ ಬೆಳೆದು ಬಂದಿರುವ ಭಾಷೆ ಮತ್ತು ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡುವುದು ಈ ಸಂಯೋಜನೆಯ ಉದ್ದೇಶವಾಗಿದೆ. ಪತ್ರಿಕೋದ್ಯಮ, ರೇಡಿಯೋ ದೂರದರ್ಶನ ಮುಂತಾದ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾಗಿರುವ ಈ ದಿನಗಳಲ್ಲಿ ಕನ್ನಡ ಭಾಷೆ-ಸಾಹಿತ್ಯದೊಂದಿಗೆ ಅದನ್ನೂ ಅಧ್ಯಯನ ಮಾಡುವುದು ಹೆಚ್ಚು ಲಾಭದಾಯಕವಾದುದಾಗಿದೆ. ಈ ಮೂಲಕ ಉದ್ಯೋಗಾವಕಾಶಗಳೂ ವಿಪುಲವಾಗಿದೆ. ಮಾಧ್ಯಮಗಳಿಗೆ ಭಾಷೆಯೇ ಅತಿಮುಖ್ಯವಾದ ಸಾಧನವಾಗಿದ್ದು, ಇವರೆಡರ ಅವಶ್ಯಕತೆ ಸಮಾಜಕ್ಕೆ ಇಂದು ಅನಿವಾರ್ಯವಾಗಿದೆ. ಹೀಗಾಗಿ ಐಚ್ಛಿಕಕನ್ನಡ, ಪತ್ರಿಕೋದ್ಯಮ, ಸಮಾಜಶಾಸ್ತ್ರ ವಿಷಯಗಳ ಸಂಯೋಜನೆಯನ್ನು ವಿಶೇಷವಾಗಿ ಅಧ್ಯಯನ ನಡೆಸಿದರೆ ಹೆಚ್ಚು ಹೆಚ್ಚು ಉದ್ಯೋಗವಕಾಶಗಳು ದೊರೆಯುತ್ತವೆ ಎಂಬ ಉದ್ದೇಶದೊಂದಿಗೆ ಈ ಸಂಯೋಜನೆಯನ್ನು ಅಳವಡಿಸಲಾಗಿದೆ.

AIM OF THE COURSE

ಭಾಷೆ, ಸಂಸ್ಕೃತಿ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆಯನ್ನು ಗಳಿಸುವುದಾಗಿದೆ.

DURATION

ಮೂರು ವರ್ಷಗಳು (6 ಸೆಮಿಸ್ಟರ್ ಗಳನ್ನು ಒಳಗೊಂಡಿರುತ್ತದೆ)

ELIGIBILITY

10+2 ಉತ್ತೀರ್ಣರಾಗಿರಬೇಕು

SPECIAL FEATURES

ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದು, ಪ್ರಬಂಧಮಂಡನೆ, ವಿವಿಧ ಪತ್ರಿಕಾಲಯಗಳಿಗೆ ಭೇಟಿ ನೀಡಿ ಪತ್ರಿಕೆಗಳ ಕಾರ್ಯವೈಖರಿಯನ್ನು ಸ್ವತಃ ಕಂಡುಕೊಳ್ಳುವುದು.

CAREER OPPORTUNITIES

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೂಲಂಕುಷವಾಗಿ ಅರಿಯುವ ಅವಕಾಶ, ಕನ್ನಡ ಪ್ರಾಧ್ಯಾಪಕರಾಗುವ, ಮಾಧ್ಯಮಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ಆಗುವ ಅವಕಾಶ, ಹೀಗೆ ಹತ್ತಾರು ಅವಕಾಶಗಳು ಒದಗುವ ಸಾಧ್ಯತೆಗಳಿವೆ.

bottom of page