top of page

KANNADA

VISION

ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಈ ಭಾಷೆಯಲ್ಲಿ ರಚನೆಗೊಂಡಿರುವ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುವುದರ ಮೂಲಕ ಉತ್ತಮ ಮಾತುಗಾರರಾಗಬಹುದು, ಬರಹಗಾರರಾಗಬಹುದು. ಕನ್ನಡ ಭಾಷೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಪಡೆಯಬಹುದು.


ಕನ್ನಡ ಭಾಷೆಯಲ್ಲಿ ರಚನೆಯಾಗಿರುವ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿರುವ ಸಮೃದ್ಧ ಸಾಹಿತ್ಯದ ಪರಿಚಯವಾಗುತ್ತದೆ. ಪದವಿ ಲಭಿಸುತ್ತದೆ. ಕನ್ನಡ ಎಂ.ಎ., ಪದವಿಗೆ ಪ್ರವೇಶಪಡೆಯಬಹುದು.

MISSION

ಭಾಷಾ ಕೌಶಲ್ಯವನ್ನು ಬೆಳೆಸಿಕೊಂಡು ಮುಂದೆ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಗೌರವ, ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಲು ಸಾಧ್ಯವಿದೆ.


ಮುಂದೆ ಕನ್ನಡ ಪ್ರಾಧ್ಯಾಪಕರಾಗಲು, UPSC, KPSC ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಸುಲಭವಾಗಿ ತೇರ್ಗಡೆಹೊಂದಿ ಅತ್ಯುನ್ನತ ಸ್ಥಾಯಿಗೇರಲು ಸಾಧ್ಯವಾಗುತ್ತದೆ. ಮಾಧ್ಯಮಗಳಲ್ಲಿ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಬಹುದು. ಹೀಗೆ ಹತ್ತಾರು ಅವಕಾಶಗಳನ್ನು ಕನ್ನಡ ಭಾಷೆಯಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳುವುದರ ಮೂಲಕ ಕೇವಲ ಕರ್ನಾಟಕವಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲಿಯು ಉದ್ಯೋಗಾವಕಾಶ ಪಡೆಯಲು ಇವತ್ತು ಸಾಧ್ಯವಿದೆ.

ಎಂದೆಂದಿಗೂ ಕನ್ನ





ABOUT THE DEPARTMENT

ಪದವಿ ಹಂತದಲ್ಲಿ ಭಾಷಾ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಭಾಷೆ ಪ್ರಮುಖವಾಗಿ ಕಾಣುತ್ತದೆ. ಕಾರಣ ಈ ನೆಲದ ಭಾಷೆ. ಕರ್ನಾಟಕದ ಆಡಳಿತ ಭಾಷೆ. ಸುಮಾರು 2000 ವರ್ಷಗಳ ಇತಿಹಾಸವಿರುವ ಭಾಷೆ. ಜ್ಞಾನಪೀಠ ಪ್ರಶಸ್ತಿಯನ್ನು 8 ಮಂದಿ ಕನ್ನಡ ಸಾಹಿತಿಗಳು ಪಡೆದುಕೊಂಡಿರುವಂತಹ ಭಾಷೆ. ಈ ಭಾಷೆಗೆ ಪ್ರಾಚೀನ ಇತಿಹಾಸ ಇದ್ದು, ಇದೊಂದು ಶಾಸ್ತ್ರೀಯ ಭಾಷೆ ಎಂದು ಭಾರತ ಸರ್ಕಾರದಿಂದ ಪರಿಗಣಿಸಲ್ಪಟ್ಟಿರುವಂತಹ ಭಾಷೆ. ಇಂತಹ ಭಾಷೆಯನ್ನು ಆಯ್ಕೆಮಾಡಿಕೊಂಡು ಸಾಹಿತ್ಯವನ್ನು ಓದುವುದು ಒಂದು ಹೆಮ್ಮೆಯ, ಹೆಗ್ಗಳಿಕೆಯ ವಿಷಯ.


ಬಿ.ಎ.,ಪದವಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಅಧ್ಯಯನ ಮಾಡಲು ವಿಜಯ ಕಾಲೇಜಿನಲ್ಲಿ ಅವಕಾಶವಿದೆ. ಇದರ ಮೂಲಕ ಕನ್ನಡ ಭಾಷೆಯಲ್ಲಿ ರಚನೆಯಾಗಿರುವ ಸಮಗ್ರ ಸಾಹಿತ್ಯವನ್ನು ಕುರಿತು ವಿಶೇಷವಾಗಿ ಅಭ್ಯಸಿಸಲು ಸಾಧ್ಯವಾಗುತ್ತದೆ.

FACULTY

Dr. S L Manjunath

Dr. S L Manjunath

B.Ed., MA, PhD

Associate Professor

KANNADA

32

YEARS OF EXPERIENCE

Dr. S Ramamurthy

Dr. S Ramamurthy

MA, NET, PhD

Associate Professor

KANNADA

24

YEARS OF EXPERIENCE

Dr. Lakshmi P

Dr. Lakshmi P

MA, NET, PhD

Associate Professor

KANNADA

26

YEARS OF EXPERIENCE

Arun Kumar V

Arun Kumar V

MA

Assistant Professor

KANNADA

25

YEARS OF EXPERIENCE

© 2035 by Vijaya College, Jayanagar.

bottom of page